+91 80 2244 4033 ksccsfltd@gmail.com

Karnataka State Co-Op Credit Societies Federation Ltd.

ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ನಿಯಮಿತ

ಮಹಾಮಂಡಳದಿಂದ ಕೊಪ್ಪಳದಲ್ಲಿ ನಡೆದ 66ನೇ ಅಖಿಲ ಭಾರತ ಸಹಕಾರ ಸಪ್ತಾಹ ಸಮಾರಂಭದ ವರದಿ ಮತ್ತು ಚಿತ್ರಗಳು

ಕೊಪ್ಪಳದಲ್ಲಿ ರಾಜ್ಯಮಟ್ಟದ ಅಖಿಲ ಭಾರತ ಸಹಕಾರ ಸಪ್ತಾಹ ಆಚರಣೆ
ಸಹಕಾರಿ ಕ್ಷೇತ್ರಕ್ಕೆ ತೆರಿಗೆ ವಿನಾಯಿತಿ ನೀಡುವುದು ಅಗತ್ಯ
– ಶ್ರೀ ಎಚ್.ಕೆ. ಪಾಟೀಲ್

ಕೊಪ್ಪಳ: ಕೇಂದ್ರ ಸರ್ಕಾರವು ಕಾರ್ಪೋರೇಟ್ ವಲಯಕ್ಕೆ ನೀಡಿದಷ್ಟು ಮಹತ್ವ ಸಹಕಾರ ವಲಯಕ್ಕೆ ನೀಡಲಿ. ಸಹಕಾರ ಕ್ಷೇತ್ರಕ್ಕೆ ತೆರಿಗೆ ವಿನಾಯಿತಿ ಸಹಕಾರ ನೀಡುವುದು ತುಂಬ ಅಗತ್ಯವಾಗಿದೆ ಎಂದು ಹಿರಿಯ ಸಹಕಾರಿ ಮುಖಂಡರು ಹಾಗೂ ಶಾಸಕರಾದ ಶ್ರೀ ಎಚ್.ಕೆ. ಪಾಟೀಲರು ಹೇಳಿದರು.

ನಗರದ ಶಿವಶಾಂತ ಮಂಗಲ ಭವನದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ಸೇರಿದಂತೆ ವಿವಿಧ ಸಹಕಾರ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ 66ನೇ ಅಖಿಲ ಭಾರತ ಸಹಕಾರ ಸಪ್ತಾಹ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸಹಕಾರ ಸಪ್ತಾಹದಲ್ಲಿ ಸರ್ಕಾರ ಸಂಪೂರ್ಣ ಪಾಲ್ಗೊಂಡು ಕೆಲಸ ಮಾಡಬೇಕು. ಆಡಳಿತಾರೂಢ ಹಿರಿಯ ಶಾಸಕರು ಸಹಕಾರ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಬೇಕು ಬೇಡಿಕೆಗಳ ಬಗ್ಗೆ ಸರ್ಕಾರದ ಗಮನಕ್ಕೆ ತರಬೇಕು. ಸಮಸ್ಯೆಗಳನ್ನು ಇತ್ಯರ್ಥಪಡಿಸುವ ಕೆಲಸ ಮಾಡಬೇಕು. ಪ್ರಸ್ತುತ ನವ ಭಾರತ ನಿರ್ಮಾಣದಲ್ಲಿ ಸಹಕಾರಿ ಸಂಸ್ಥೆಗಳ ಪಾತ್ರ ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ಸಹಕಾರಿಗಳ ನೂತನ ಯೋಜನೆಗಳ ಮೂಲಕ ಸಹಕಾರ ಸಂಸ್ಥೆಗಳನ್ನು ಕಟ್ಟಿ-ಬೆಳೆಸುವ ಜೊತೆಗೆ ಸೇವೆ-ಉದ್ಯೋಗ ಸೃಷ್ಠಿಗೆ ಆದ್ಯತೆ ನೀಡಬೇಕೆಂದರು.

ಸಹಕಾರಿ ವಲಯಕ್ಕೆ ಆದಾಯ ತೆರಿಗೆಯಲ್ಲಿ ವಿನಾಯಿತಿ ನೀಡುವುದು ಅಗತ್ಯವಿದೆ. ಇದಕ್ಕೆ ಕೇಂದ್ರ ಸರ್ಕಾರವು ಸಹ ಪ್ರೋತ್ಸಾಹ ನೀಡಬೇಕು. ಖಾಸಗಿ ಬ್ಯಾಂಕ್‍ಗಳಿಗೆ ಆದಾಯ ತೆರಿಗೆಯಲ್ಲಿ ಶೇ. 20 ಇದ್ದರೆ, ಸಹಕಾರಿ ವಲಯಕ್ಕೆ ಶೇ. 30 ರಷ್ಟು ಆದಾಯ ತೆರಿಗೆ ಇದೆ. ಕಾರ್ಪೋರೇಟ್ ವಲಯಕ್ಕೆ ಮಾತ್ರ ಕೇಂದ್ರ ಆದಾಯ ತೆರಿಗೆ ವಿನಾಯಿತಿ ನೀಡಿದೆ. ಸಾಲ ಮನ್ನಾ ಬಿಟ್ಟರೆ ಮತ್ಯಾವುದೇ ಮಹತ್ವದ ಕೊಡುಗೆಗಳಿಲ್ಲ. ಸರ್ಕಾರದ ವಿಶ್ವಾಸರ್ಹತೆ ಗಳಿಸುವ ಮೂಲಕ ನಾವು ಸಹಕಾರಿ ಕ್ಷೇತ್ರ ಬೆಳೆಸಿಕೊಂಡು ಬಂದಿದ್ದೇವೆ. ನವ ಭಾರತದಲ್ಲಿ ಸಹಕಾರ ಕ್ಷೇತ್ರ ಬೆಳೆಯಬೇಕೆಂದರೆ ಎಲ್ಲರಿಗು ಕೊಟ್ಟಂತ ಪ್ರೀತಿ ನಮಗೆ ಕೊಟ್ಟರೆ ಅನುಕೂಲವಾಗಲಿದೆ ಎಂದರು.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷರಾದ ಶ್ರೀ ಎನ್. ಗಂಗಣ್ಣನವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ಮಾತನಾಡಿ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿರುವ ಸಹಕಾರ ಸಂಸ್ಥೆಗಳು ಜನರ ಆರ್ಥಿಕ ಅಭಿವೃದ್ಧಿಯಲ್ಲಿ ನೆರವಾಗುತ್ತಿದ್ದು, ಅವರ ಬದುಕನ್ನು ಹಸನುಗೊಳಿಸಿವೆ. ಇಂತಹ ಸಂಸ್ಥೆಗಳ ಮೇಲೆ ಆದಾಯ ತೆರಿಗೆ ವಿಧಿಸುತ್ತಿರುವುದು ಅತ್ಯಂತ ವ್ಯತಿರಿಕ್ತವಾದ ಪರಿಣಾಮ ಬೀರಿದೆ. ಈ ನಿಟ್ಟಿನಲ್ಲಿ ಸಹಕಾರಿಗಳೆಲ್ಲರೂ ಒಟ್ಟುಗೂಡಿ ಸಹಕಾರಿ ಕ್ಷೇತ್ರಕ್ಕೆ ತೆರಿಗೆ ವಿನಾಯಿತಿ ನೀಡುವಂತೆ ಮಾಡಬೇಕಾಗಿದೆ ಎಂದು ತಿಳಿಸಿದರು.

ರಾಜ್ಯ ಸಹಕಾರ ಮಹಾಮಂಡಳದ ಮತ್ತು ರಾಜ್ಯ ಪತ್ತಿನ ಸಹಕಾರ ಮಹಾಮಂಡಳದ ನಿರ್ದೇಶಕರಾದ ಡಾ. ಶೇಖರಗೌಡ ಮಾಲಿಪಾಟೀಲ ಅವರು ಮಾತನಾಡಿ, ದೇಶದ ಅಭಿವೃದ್ಧಿಯಲ್ಲಿ ಸಹಕಾರಿ ಕ್ಷೇತ್ರದ ಪಾತ್ರ ಮಹತ್ವದ್ದಾಗಿದೆ ಸಹಕಾರ ವಲಯದಿಂದ ದೇಶದ ಬೆಳವಣಿಗೆಯಾಗಲಿದ್ದು, ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ರಾಜ್ಯ ಪತ್ತಿನ ಸಹಕಾರ ಮಹಾಮಂಡಳ ಮತ್ತು ರಾಜ್ಯದ ಎಲ್ಲಾ ಜಿಲ್ಲಾ ಸಹಕಾರ ಯೂನಿಯನ್ನುಗಳು ಸಹಕಾರ ಚಳವಳಿಯ ಪರಿಣಾಮಕಾರಿ ಬೆಳವಣಿಗಾಗಿ ಶ್ರಮಿಸುತ್ತಾ ಬಂದಿವೆ ಎಂದು ತಿಳಿಸಿದರು.

ಸಮಾರಂಭದಲ್ಲಿ ಕ್ರಿಬ್ಕೋ ಆರ್.ಜಿ.ಬಿ. ಸದಸ್ಯರಾದ ಶ್ರೀ ಕೆ. ಬಸವರಾಜ ಹಿಟ್ನಾಳ್, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರಾದ ಶ್ರೀ ರಮೇಶ ವೈದ್ಯ, ರಾ.ಪ.ಸ. ಬ್ಯಾಂಕುಗಳ ಮಹಾಮಂಡಳ ದೆಹಲಿ ಇದರ ನಿರ್ದೇಶಕರಾದ ಶ್ರೀ ಕೆ. ಕಾಳಪ್ಪ ಹಾಗೂ ಸಹಕಾರ ರತ್ನ ಪ್ರಶಸ್ತಿ ಪುರಸ್ಕøತರಾದ ಶ್ರೀಮತಿ ಶಕುಂತಲಾ ಕೆ. ಬೆಲ್ದಾಳೆ ಹಾಗೂ ಶ್ರೀ ಬಿ.ಡಿ. ಭೂಕಾಂತ್ ರವರನ್ನು ಗೌರವಿಸಿ, ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಸಂಸದರಾದ ಶ್ರೀ ಸಂಗಣ್ಣ ಕರಡಿ, ಶಾಸಕರಾದ ಶ್ರೀ ಹಾಲಪ್ಪ ಆಚಾರ್, ಶಾಸಕರಾದ ಶ್ರೀ ಅಮರೇಗೌಡ ಬಯ್ಯಾಪೂರ, ಶ್ರೀ ಪರಣ್ಣ ಮುನವಳ್ಳಿ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀ ಹೆಚ್. ವಿಶ್ವನಾಥರೆಡ್ಡಿ, ಮಾಜಿ ಸಂಸದರಾದ ಶಿವರಾಮೇಗೌಡ, ಮಾಜಿ ಶಾಸಕರಾದ ಶ್ರೀ ಬಸವರಾಜ ಹಿಟ್ನಾಳ, ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳದ ಉಪಾಧ್ಯಕ್ಷರಾದ ಡಾ. ಬಿ.ಡಿ.ಭೂಕಾಂತ, ಪಟ್ಟಣ ಸಹಕಾರ ಮಹಾಮಂಡಳದ ಉಪಾಧ್ಯಕ್ಷರಾದ ಶ್ರೀ ಬಿ.ಎಸ್. ಪರಮಶಿವಯ್ಯ, ಆರ್.ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷರಾದ ಶ್ರೀ ಪಂಪನಗೌಡ ಬಾದರ್ಲಿ, ತುಂಗಭದ್ರಾ ಕಾಡಾ ಅಧ್ಯಕ್ಷರಾದ ಶ್ರೀ ಆರ್. ಬಸನಗೌಡ ತುರ್ವಿಹಾಳ್, ಆರ್.ಡಿ.ಸಿ.ಸಿ. ಬ್ಯಾಂಕ್ ಉಪಾಧ್ಯಕ್ಷರಾದ ಶ್ರೀ ಎಸ್. ಪಂಪಾಪತಿ ಸಾಹುಕಾರ, ರಾ.ಬ.&ಕೊ ಜಿಲ್ಲೆಗಳ ಹಾಲು ಒಕ್ಕೂಟದ ಉಪಾಧ್ಯಕ್ಷರಾದ ಶ್ರೀ ಶಿವಪ್ಪ ವಾದಿ, ಮಹಾಮಂಡಳದ ನಿರ್ದೇಶಕರಾದ ಶ್ರೀ ವಿಜಯಕುಮಾರ ಪಾಟೀಲ, ಅಪೆಕ್ಸ್ ಬ್ಯಾಂಕ್ ನಿರ್ದೇಶಕರಾದ ಶ್ರೀ ಶರಣಗೌಡ ಪಾಟೀಲ ಬಯ್ಯಾಪುರ, ಕಾಸ್ಕಾರ್ಡ್ ಬ್ಯಾಂಕ್ ನಿರ್ದೇಶಕರಾದ ಶ್ರೀ ದೊಡ್ಡಪ್ಪ ದೇಸಾಯಿ, ರಾಜ್ಯ ಸಹಕಾರ ಪತ್ತಿನ ಮಹಾಮಂಡಳದ ನಿರ್ದೇಶಕರುಗಳಾದ ಶ್ರೀ ವಿ.ರಾಜು, ಡಾ|| ಸಂಜಯ ಪಂ. ಹೊಸಮಠ, ಶ್ರೀ ಎಂ.ಜೆ.ನರೇಂದ್ರ ಕುಮಾರ, ಶ್ರೀ ಡಿ.ಚನ್ನಯ್ಯ, ಶ್ರೀ ಕೆ.ಕೆ.ಮಹೇಂದ್ರ ಪ್ರಸಾದ್‍ಗೌಡ, ಶ್ರೀ ಜಿ.ಮಲ್ಲಿಕಾರ್ಜುನಯ್ಯ, ಶ್ರೀ ತಮ್ಮಣ್ಣ ಬಿ. ಕೆಂಚರಡ್ಡಿ, ಶ್ರೀ ಧರೇಪ್ಪ ಎಂ. ಅಲಗೂರ, ಶ್ರೀ ಗುರುಪಾದಪ್ಪಗೌಡ ಬ. ಪಾಟೀಲ, ಶ್ರೀ ಹೊನ್ನಯ್ಯ ವಿ. ಹಿರೇಮಠ, ಶ್ರೀ ಹೆಚ್.ಟಿ.ನಾಗೇಶ್, ಶ್ರೀ ಡಿ.ಆರ್.ನಾಗೇಶಪ್ಪ, ಶ್ರೀ ಉಮೇಶ ಶಿ. ಬಾಳಿ, ಶ್ರೀ ರವೀಂದ್ರ ಪ್ರಲ್ಹಾದ ಕಲಬುರ್ಗಿ, ಶ್ರೀ ಚಿತ್ತರಂಜನ್ ಬೋಳಾರ್ ಮತ್ತು ಕೊಪ್ಪಳ ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷರಾದ ಶ್ರೀ ತೋಟಪ್ಪ ಕಾಮನೂರು, ಮಹಾಮಂಡಳದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಎಸ್.ಎನ್. ಅರುಣ್‍ಕುಮಾರ್, ಜಂಟಿ ನಿಬಂಧಕರಾದ ಶ್ರೀ ಗೋಪಾಲ ಚವ್ಹಾಣ, ಆರ್.ಡಿ.ಸಿ.ಸಿ. ಬ್ಯಾಂಕಿನ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ಐ.ಎಸ್. ಗಿರಡ್ಡಿ, ಉಪನಿಬಂಧಕರಾದ ಶ್ರೀ ಎಸ್.ಕೆ. ಸಿದ್ನೆಕೊಪ್ಪ, ಲೆಕ್ಕಪರಿಶೋಧನಾ ಇಲಾಖೆಯ ಉಪನಿರ್ದೇಶಕರಾದ ಶ್ರೀ ಬಸವರಾಜ ಪಾಟೀಲ ಕೊಂಕಲ್, ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳದ ಸಲಹೆಗಾರರಾದ ಶ್ರೀ ಕೆ.ಎಸ್.ಗುರುಪ್ರಸಾದ್, ಪ್ರಭಾರ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಪಿ. ಆಶಾಲತಾ, ಕ.ರಾ.ಪಟ್ಟಣ.ಸ. ಬ್ಯಾಂಕುಗಳ ಮಹಾಮಂಡಳದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ಪುಂಡಲೀಕ ಕೆರೂರು, ಕಾರ್ಯಕ್ರಮದ ಸಮನ್ವಯಾಧಿಕಾರಿ ಶ್ರೀ ಕೆ. ಮಲ್ಲಯ್ಯ, ಕೊಪ್ಪಳ ಜಿಲ್ಲಾ ಸಹಕಾರ ಯೂನಿಯನ್ನಿನ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ಶರಣಬಸಪ್ಪ ಕಾಟ್ರಳ್ಳಿ ಸೇರಿದಂತೆ ಸಹಕಾರಿ ಮುಖಂಡರು, ಅಧಿಕಾರ ವರ್ಗದವರು ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳವು 66ನೇ ಅಖಿಲ ಭಾರತ ಸಹಕಾರ ಸಪ್ತಾಹ ಸಮಾರಂಭದಲ್ಲಿ ಸಹಕಾರ ಕ್ಷೇತ್ರದಲ್ಲಿ ಉತ್ತಮವಾಗಿ ಸೇವೆಸಲ್ಲಿಸಿರುವ ಸಹಕಾರ ಸಂಘಗಳಿಗೆ ಮತ್ತು ಸಹಕಾರಿಗಳಿಗೆ ವಿಭಾಗವಾರು “ಉತ್ತಮ ಸಹಕಾರ ಸಂಘ” ಮತ್ತು “ಉತ್ತಮ ಸಹಕಾರಿ” ಪ್ರಶಸ್ತಿಯನ್ನು ನೀಡಿ ಗೌರವಿಸಿ ಅಭಿನಂದಿಸಿರುವುದು.

ಗ್ರೂಪ್-1 ವಿಭಾಗ
ಗ್ರೂಪ್-2 ವಿಭಾಗ
ಗ್ರೂಪ್-3 ವಿಭಾಗ
ಗ್ರೂಪ್-4 ವಿಭಾಗ
ಗ್ರೂಪ್-5 ವಿಭಾಗ

Back To Top