+91 80 2244 4033 ksccsfltd@gmail.com

Karnataka State Co-Op Credit Societies Federation Ltd.

ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ನಿಯಮಿತ

ಮಂಡ್ಯ:- ದಿನಾಂಕ: 03-10-2018 ರಂದು ಮಹಾಮಂಡಳದ ವತಿಯಿಂದ ಮೈಸೂರು ವಿಭಾಗ ವ್ಯಾಪ್ತಗೊಳಪಡುವ ಪತ್ತಿನ ಸಹಕಾರ ಸಂಘಗಳ ಆಡಳಿತಮಂಡಳಿ ನಿರ್ದೇಶಕರು, ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ನಡೆದ ಶಿಕ್ಷಣ ತರಬೇತಿ ಕಾರ್ಯಾಗಾರ

ದಿನಾಂಕ: 03-10-2018 ರಂದು ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳದ ವತಿಯಿಂದ ಮೈಸೂರು ವಿಭಾಗ ವ್ಯಾಪ್ತಗೊಳಪಡುವ ಪತ್ತಿನ ಸಹಕಾರ ಸಂಘಗಳ ಆಡಳಿತಮಂಡಳಿ ನಿರ್ದೇಶಕರು, ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಒಂದು ದಿನದ ಶೈಕ್ಷಣಿಕ ಕಾರ್ಯಾಗಾರವನ್ನು ರೈತ ಸಭಾಂಗಣ, ರೈತರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿ., ಸಂಜಯ ಸರ್ಕಲ್, ಮೈಸೂರು-ಬೆಂಗಳೂರು ರಸ್ತೆ, ಮಂಡ್ಯ ಇಲ್ಲಿ ಜರುಗಿದ್ದು,
ಸದರಿ ಕಾರ್ಯಾಗಾರದ ಉದ್ಘಾಟನೆಯನ್ನು ಶ್ರೀ ಎಂ. ಶ್ರೀನಿವಾಸ್, ಶಾಸಕರು ಮಂಡ್ಯ ವಿಧಾನಸಭಾ ಕ್ಷೇತ್ರ ಇವರು ನೆರವೇರಿಸಿದರು, ಕಾರ್ಯಾಗಾರದ ಅಧ್ಯಕ್ಷತೆಯನ್ನು ಮಹಾಮಂಡಳದ ಅಧ್ಯಕ್ಷರಾದ ಶ್ರೀ ಸಿ.ಎಂ.ಮಾರೇಗೌಡ ರವರು ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಮಹಾಮಂಡಳದ ನಿರ್ದೇಶಕರುಗಳಾದ ಶ್ರೀ ಕೆ.ಎಲ್. ಶಿವರಾಮು, ಶ್ರೀ ಪಿ.ಕೆ. ಜಯಕೃಷ್ಣೇಗೌಡ, ಶ್ರೀ ಡಿ. ಚನ್ನಯ್ಯ, ಶ್ರೀ ಎನ್.ಬಿ. ರವೀಶಯ್ಯ ಮತ್ತು ಶ್ರೀ ಕೆ.ಕೆ. ಮಹೇಂದ್ರಪ್ರಸಾದ್ ಗೌಡ ರವರು ಭಾಗವಹಿಸಿದ್ದರು.
ಅತಿಥಿಗಳಾಗಿ ಶ್ರೀ ಎಂ.ಬಿ. ಜಗದೀಶ್, ಅಧ್ಯಕ್ಷರು, ರೈತರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿ., ಮಂಡ್ಯ, ಶ್ರೀ ಆರ್.ಜೆ. ಕಾಂತರಾಜು, ಕೆ.ಸಿ.ಎಸ್, ಸಹಕಾರ ಸಂಘಗಳ ಉಪ ನಿಬಂಧಕರು, ಮಂಡ್ಯ ಜಿಲ್ಲೆ ಮತ್ತು ಶ್ರೀ ಎಂ.ಬಿ. ವಾಸುದೇವಮೂರ್ತಿ ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಮಂಡ್ಯ ಉಪ ವಿಭಾಗ ಇವರು ಹಾಜರಿದ್ದರು, ಕಾರ್ಯಾಗಾರದಲ್ಲಿ ಶ್ರೀ ಹೆಚ್.ಎಸ್. ನಾಗರಾಜಯ್ಯ, ಸಹಕಾರ ಸಂಘಗಳ ಅಪರ ನಿಬಂಧಕರು, (ನಿವೃತ್ತ), ಶ್ರೀ ಶ್ರೀ ಅನಿಲ್ ಭಾರದ್ವಾಜ್, ಸನ್ನದು ಲೆಕ್ಕಪರಿಶೋಧಕರು ಹಾಗೂ ಶ್ರೀ ಸತೀಶ್ ಕೃಷ್ಣ ರವರುಗಳು ಉಪನ್ಯಾಸಮಾಡಿದರು ಈ ಸಂದರ್ಭದಲ್ಲಿ ಮಹಾಮಂಡಳದ ಸಲಹೆಗಾರರಾದ ಶ್ರೀ ಕೆ.ಎಸ್. ಗುರುಪ್ರಸಾದ್, ಪ್ರಭಾರ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ಮತಿ ಪಿ. ಆಶಾಲತಾ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

Back To Top