+91 80 2244 4033 ksccsfltd@gmail.com

Karnataka State Co-Op Credit Societies Federation Ltd.

ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ನಿಯಮಿತ

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಮತ್ತು ರಾಜ್ಯ ಪತ್ತಿನ ಸಹಕಾರ ಮಹಾಮಂಡಳದ ಸಂಯುಕ್ತಾಶ್ರಯದಲ್ಲಿ ಬೆಂಗಳೂರು ವಿಭಾಗದಲ್ಲಿ ನಡೆದ ಉನ್ನತ ಮಟ್ಟದ ಶಿಕ್ಷಣ ತರಬೇತಿ ಕಾರ್ಯಕ್ರಮ

ಬೆಂಗಳೂರು: ದಿನಾಂಕ: 03.08.2019 ರಂದು ಹೋಟೆಲ್ ಸಿಟಡೆಲ್, ಆನಂದರಾವ್ ವೃತ್ತ, ಬೆಂಗಳೂರು ಇಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು, ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳಿ ನಿ., ಬೆಂಗಳೂರು ಮತ್ತು ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲಾ ಸಹಕಾರ ಯೂನಿಯನ್ ಮತ್ತು ಸಹಕಾರ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಬೆಂಗಳೂರು ವಿಭಾಗದ ವ್ಯಾಪ್ತಿಗೊಳಪಡುವ ಪತ್ತಿನ ಸಹಕಾರ ಸಂಘಗಳ ಪದಾಧಿಕಾರಿಗಳು, ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಒಂದು ದಿನದ ಶೈಕ್ಷಣಿಕ ಕಾರ್ಯಗಾರವನ್ನು ಏರ್ಪಡಿಸಲಾಗಿತ್ತು.

ಡಾ. ಬಿ.ಡಿ.ಭೂಕಾಂತ, ಉಪಾಧ್ಯಕ್ಷರು, ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ನಿ., ಬೆಂಗಳೂರು ರವರು ಕಾರ್ಯಾಗಾರ ಉದ್ಘಾಟಿಸಿದರು ನಂತರ ಅವರು ಮಾತನಾಡಿ ರಾಜ್ಯ ಮತ್ತು ರಾಷ್ಟ್ರದ ಆರ್ಥಿಕ ಪ್ರಗತಿಯಲ್ಲಿ ಪತ್ತಿನ ಸಹಕಾರ ಸಂಘಗಳ ಪಾತ್ರ ಹೆಚ್ಚು ಪ್ರಮುಖ್ಯವಾಗಿದ್ದು ಸದಸ್ಯರಿಗೆ ಸಾಲ ಸೌಲಭ್ಯಗಳನ್ನು ನೀಡುವ ಮೂಲಕ ಸದಸ್ಯರ ಆರ್ಥಿಕ ಮಟ್ಟವನ್ನು ಸುಧಾರಿಸುತ್ತಿವೆ ಎಂದು ತಿಳಿಸಿದರು. ಸಹಕಾರ ಶಿಕ್ಷಣ ತರಬೇತಿಯ ಅಗತ್ಯತೆ ಮತ್ತು ಮಹತ್ವವನ್ನು ಹಾಜರಿದ್ದ ಪದಾಧಿಕಾರಿಗಳು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಮನದಟ್ಟು ಮಾಡಿಕೊಟ್ಟರು.

ಕಾರ್ಯಾಗಾರದ ಅಧ್ಯಕ್ಷತೆಯನ್ನು ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷರಾದ ಶ್ರೀ ಎನ್.ಗಂಗಣ್ಣ ರವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರಾಜ್ಯ ಸಹಕಾರ ಮಹಾಮಂಡಳದ ಉಪಾಧ್ಯಕ್ಷರಾದ ಶ್ರೀ ಎನ್.ಚಂದ್ರಪ್ಪ ಅವರು ಪತ್ತಿನ ಸಹಕಾರ ಚಳುವಳಿಯ ಬೆಳವಣಿಗೆ ಬಗ್ಗೆ ಮಾತನಾಡಿದರು.

ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕರುಗಳಾದ ಶ್ರೀ ಎಸ್.ಆರ್.ಗಿರೀಶ್, ಶ್ರೀ ಆರ್.ಕೆ.ಪಾಟೀಲ, ರಾಜ್ಯ ಪತ್ತಿನ ಮಹಾಮಂಡಳದ ನಿರ್ದೇಶಕರುಗಳಾದ ಶ್ರೀ ಸಿ.ಎಂ.ಮಾರೇಗೌಡ, ಶ್ರೀ ಎಂ.ಜೆ.ನರೇಂದ್ರ ಕುಮಾರ, ಶ್ರೀ ಡಿ.ಚನ್ನಯ್ಯ, ಶ್ರೀ ಕೆ.ಕೆ.ಮಹೇಂದ್ರ ಪ್ರಸಾದ್‍ಗೌಡ, ಶ್ರೀ ಜಿ.ಮಲ್ಲಿಕಾರ್ಜುನಯ್ಯ, ಶ್ರೀ ಹೆಚ್.ಟಿ.ನಾಗೇಶ್, ಶ್ರೀ ಡಿ.ಆರ್.ನಾಗೇಶಪ್ಪ, ರಾಜ್ಯ ಮಹಾಮಂಡಳದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಎಸ್.ಆರ್.ಅರುಣ್‍ಕುಮಾರ್, ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಹಕಾರ ಯೂನಿಯನ್‍ನ ಅಧ್ಯಕ್ಷರುಗಳಾದ ಶ್ರೀ ಕೆ.ವಿಜಯಕುಮಾರ್ ಮತ್ತು ಶ್ರೀ ಎ.ಸಿ.ನಾಗರಾಜ್ ರವರುಗಳು ಭಾಗವಹಿಸಿದ್ದರು

ಈ ಶೈಕ್ಷಣಿಕ ತರಬೇತಿ ಕಾರ್ಯಾಗಾರದಲ್ಲಿ ಶ್ರೀ ಹೆಚ್.ಎಸ್.ನಾಗರಾಜಯ್ಯ, ನಿವೃತ್ತ ಅಪರ ನಿಬಂಧಕರು ರವರು “ಸಹಕಾರ ವಲಯದಲ್ಲಿ ಇತ್ತೀಚಿನ ಬೆಳವಣಿಗೆಗಳು, ಆಡಳಿತ ನಿರ್ವಹಣೆ ಮತ್ತು ಇತ್ತೀಚಿನ ಸಹಕಾರ ಕಾಯ್ದೆ ತಿದ್ದುಪಡಿ” ಕುರಿತು ಉಪನ್ಯಾಸ ನೀಡಿದರು ಮಧ್ಯಾಹ್ನದ ಊಟದ ನಂತರ ಶ್ರೀ ವೆಂಕಟಸ್ವಾಮಿ, ನಿವೃತ್ತ, ಎನ್.ಪಿ.ಆರ್.ಬಿ ನಿರ್ದೇಶಕರು “ಪತ್ತಿನ ಸಹಕಾರ ಸಂಘಗಳಲ್ಲಿ ಸಾಲ ಮಂಜೂರಾತಿಯ ನಿಯಮಗಳು ಹಾಗೂ ಸಾಲ ವಸೂಲಾತಿಗೆ ಅನುಸರಿಸಬೇಕಾದ ಕ್ರಮಗಳು” ಕುರಿತು ಮತ್ತು ಶ್ರೀ ಪಿ.ರುದ್ರಪ್ಪ, ಸಲಹೆಗಾರರು, ರಾಜ್ಯ ಸಹಕಾರ ಮಹಾಮಂಡಳ ಇವರಿಂದ “ಕರ್ನಾಟಕದಲ್ಲಿ ಸಹಕಾರ ಚಳವಳಿಯ ಸಾಧನೆ ಸಹಕಾರ ಮಹಾಮಂಡಳ ಮತ್ತು ಸಹಕಾರ ಪತ್ತಿನ ಸಂಘಗಳ ಮಹಾಮಂಡಳಗಳ ಪಾತ್ರ” ವಿಷಯಗಳ ಕುರಿತು ಉಪನ್ಯಾಸ ನೀಡಿದರು.

ಈ ಸಂದರ್ಭದಲ್ಲಿ ರಾಜ್ಯ ಪತ್ತಿನ ಸಹಕಾರ ಮಹಾಮಂಡಳದ ಸಲಹೆಗಾರರಾದ ಶ್ರೀ ಕೆ.ಎಸ್.ಗುರುಪ್ರಸಾದ್, ರಾಜ್ಯ ಸಹಕಾರ ಮಹಾಮಂಡಳದ ಸಹಕಾರ ಶಿಕ್ಷಣಾಧಿಕಾರಿಯಾದ ಶ್ರೀ ಕೆ.ಮಲ್ಲಯ್ಯ ಮತ್ತು ರಾಜ್ಯ ಪತ್ತಿನ ಮಹಾಮಂಡಳದ ಪ್ರಭಾರ ಮುಖ್ಯಕಾರ್ಯನಿರ್ವಹಣಾಧಿಕಾರಿಯಾದ ಶ್ರೀಮತಿ ಪಿ.ಆಶಾಲತಾ ಮತ್ತು ರಾಜ್ಯ ಸಹಕಾರ ಮಹಾಮಂಡಳದ ಸಂಶೋಧನಾ ಮತ್ತು ಮೌಲ್ಯಮಾಪನದ ನಿರ್ದೇಶಕರಾದ ಶ್ರೀಮತಿ ವೀಣಾನಾಗೇಶ್ ರವರುಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದ ಆರಂಭದಲ್ಲಿ ಶ್ರೀಮತಿ ಬಿ.ಎಸ್.ಪೂರ್ಣಿಮ ರವರು ಪ್ರಾರ್ಥನೆ ಮಾಡಿದರು ರಾಜ್ಯ ಸಹಕಾರ ಮಹಾಮಂಡಳದ ಸಲಹೆಗಾರರಾದ ಶ್ರೀ ಪಿ.ರುದ್ರಪ್ಪ ರವರು ಕಾರ್ಯಕ್ರಮವನ್ನು ನಿರೂಪಿಸಿದರು

ಸದರಿ ಕಾರ್ಯಾಗಾರಕ್ಕೆ ರಾಜ್ಯ ಪತ್ತಿನ ಸಹಕಾರ ಮಹಾಮಂಡಳದಲ್ಲಿ ಸದಸ್ಯತ್ವ ಪಡೆದಿರುವ ಬೆಂಗಳೂರು ವಿಭಾಗದ 90ಕ್ಕೂ ಸಹಕಾರ ಸಂಘಗಳ ಪ್ರತಿನಿಧಿಗಳು ಹಾಜರಿದ್ದರು. ಹಾಜರಿದ್ದ ಪ್ರತಿನಿಧಿಗಳು ಕಾರ್ಯಾಗಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

Back To Top