+91 80 2244 4033 ksccsfltd@gmail.com

Karnataka State Co-Op Credit Societies Federation Ltd.

ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ನಿಯಮಿತ

ಹಾವೇರಿ: ದಿನಾಂಕ: 18-11-2018 ರಂದು ಕಾಗಿನೆಲೆಯ ಶ್ರೀ ಕನಕ ಕಲಾಭವನದಲ್ಲಿ ನಡೆದ 65ನೇ ಅಖಿಲ ಭಾರತ ಸಹಕಾರ ಸಪ್ತಾಹ (ರಾಜ್ಯ ಮಟ್ಟದ ಸಹಕಾರ ಸಪ್ತಾಹ) ಕಾರ್ಯಕ್ರಮ ಮತ್ತು ಸನ್ಮಾನ ಸಮಾರಂಭ

ಬ್ಯಾಡಗಿ: ಕಾಗಿನೆಲೆಯ ಶ್ರೀ ಕನಕ ಕಲಾಭವನದಲ್ಲಿ ದಿನಾಂಕ: 18-11-2018ನೇ ಭಾನುವಾರ ರಂದು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು ಮತ್ತು ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ನಿ., ಬೆಂಗಳೂರು, ಜಿಲ್ಲಾ ಸಹಕಾರ ಯೂನಿಯನ್, ಹಾವೇರಿ ಮತ್ತು ಸಹಕಾರ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ 65ನೇ ಅಖಿಲ ಭಾರತ ಸಹಕಾರ ಸಪ್ತಾಹ (ರಾಜ್ಯ ಮಟ್ಟದ ಸಹಕಾರ ಸಪ್ತಾಹ) ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸನ್ಮಾನ್ಯ ಶ್ರೀ ಬಂಡೆಪ್ಪ ಖಾಶಂಪೂರ ರವರು, ಸಹಕಾರ ಸಚಿವರು, ಕರ್ನಾಟಕ ಸರ್ಕಾರ, ಬೆಂಗಳೂರು ಇವರು ಮಾತನಾಡಿ ಜಿಲ್ಲೆಯ ಸಹಕಾರ ಕ್ಷೇತ್ರದ ಅಸ್ಥಿತ್ವದ ಬಗ್ಗೆ ಮಾತನಾಡುತ್ತಾ ಹಾವೇರಿ ಜಿಲ್ಲೆಗೆ ಸಂಬಂಧಿಸಿದಂತೆ ಒಟ್ಟು ರೂ. 70.36 ಕೋಟಿ ರೈತರ ಸಾಲ ಮನ್ನಾ ಮಾಡಲಾಗಿದೆ. 20 ಸಾವಿರ ರೈತರು ಇದರ ಪ್ರಯೋಜನ ಪಡೆದಿದ್ದಾರೆ ಎಂದರು.
ಮುಂದುವರೆದು ರಾಜ್ಯದಲ್ಲಿ ಸುಮಾರು 4500ಕ್ಕು ಹೆಚ್ಚು ಪತ್ತಿನ ಸಹಕಾರ ಸಂಘಗಳಿದ್ದು ಇವುಗಳ ವ್ಯಾಜ್ಯಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸುವ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ನಿಯಮಿತ., ಬೆಂಗಳೂರು ಇದರ ಆಶ್ರಯದಲ್ಲಿ ಎರಡು ಪ್ರತ್ಯೇಕ ಸಹಕಾರಿ ನ್ಯಾಯಾಲಯಗಳನ್ನು ಸ್ಥಾಪಿಸುವ ಚಿಂತನೆ ನಡೆದಿದ್ದು. ಶಿರ್ಘವೇ ಕ್ರಮಕೈಗೊಂಡು ಸಹಕಾರಿ ನ್ಯಾಯಾಲಯಗಳನ್ನು ಸ್ಥಾಪಿಸಲಾಗುವು ಎಂದು ಮಾನ್ಯ ಸಹಕಾರ ಸಚಿವರು ತಿಳಿಸಿದರು. ಹಾಗೂ ಸಹಕಾರ ಸಂಘಗಳ ಸಿಬ್ಬಂದಿಗೆ ಸೇವಾ ಭದ್ರತೆ ಒದಗಿಸುವ ಕುರಿತು ಮುಂದಿನ ಸಚಿವ ಸಂಪುಟದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗುವುದು ಎಂದು ಹೇಳಿದರು.
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಸಹಕಾರ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಸಹಕಾರ ಸಂಘಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಅವಕಾಶ ನೀಡಬೇಕು. ಸಹಕಾರ ಚಳವಳಿ ಜೀವನದ ಅವಿಭಾಜ್ಯ ಅಂಗವಾಗಿದ್ದು, ಸಾಲ ಪಡೆಯುವಾಗ ಇರುವ ಖುಷಿ ಸಾಲ, ಮರಳಿಸುವಾಗ ಇದ್ದರೆ ಮಾತ್ರ ಸಹಕಾರ ಸಂಘಗಳು ಬಾಳಿ ಬದುಕಲು ಸಾಧ್ಯ ಎಂದು ಹೇಳಿದರು.

ಸಹಕಾರಿಗಳ ಜಾಥಾಕ್ಕೆ ಚಾಲನೆ ನೀಡಿದ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಬ್ಯಾಡಗಿ ತಾಲ್ಲೂಕನ್ನು ಬರ ಪೀಡಿತ ತಾಲ್ಲೂಕು ಎಂದು ಘೋಷಿಸುವಂತೆ ಸಚಿವರಲ್ಲಿ ಮನವಿ ಮಾಡಿಕೊಂಡರು. ತುಂಗಭದ್ರಾ ಮತ್ತು ವರದಾ ನದಿಯಿಂದ ತಾಲ್ಲೂಕಿನ ಕೆರೆಗಳನ್ನು ತುಂಬಿಸುವ ಯೋಜನೆಗೆ ಚಾಲನೆ ನೀಡುವಂತೆ ಒತ್ತಾಯಿಸಿದರು.
ಮಾರಾಟ ಮಳಿಗೆ ಉದ್ಘಾಟಿಸಿದ ಶಾಸಕ ನೆಹರು ಓಲೇಕಾರ ಮಾತನಾಡಿ, ಹಾಲಿಗೆ ಏಕ ರೂಪ ದರ ನಿಗದಿ ಮಾಡಬೇಕು ಎಂದು ಆಗ್ರಹಿಸಿದರು.
ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾ ಭಾಷಣದಲ್ಲಿ ಮಾತನಾಡಿದ ರಾಜ್ಯ ಪತ್ತಿನ ಮಹಾಮಂಡಳದ ಅಧ್ಯಕ್ಷರಾದ ಶ್ರೀ ಸಿ.ಎಂ. ಮಾರೇಗೌಡ ರವರು ಮಾತನಾಡಿ 65ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮವು ಹಾವೇರಿಯ ಕಾಗಿನೆಲೆಯಲ್ಲಿ ಆಚರಿಸುತ್ತಿರುವುದು ಬಹಳ ಸಂತೋಷದ ವಿಷಯ ಮಹಾಮಂಡಳವು ಪತ್ತಿನ ಸಹಕಾರ ಸಂಘಗಳ ಸರ್ವತೋಮುಖ ಅಬಿವೃದ್ದಿಗೆ ಶ್ರಮಿಸುತ್ತಿದ್ದು ಮುಂದಿನ ದಿನಗಳಲ್ಲಿ ಉತ್ತರ ಕನ್ನಡ ಭಾಗಕ್ಕೆ ಹೆಚ್ಚಿನ ಆಧ್ಯತೆ ನೀಡುವ ಮೂಲಕ ವಿಷೇಶ ಶಿಕ್ಷಣ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಾಗಿ ತಿಳಿಸಿ ಮಹಾಮಂಡಳದ ಭವಿಷ್ಯದ ಯೋಜನೆಯಾಗಿ ಪತ್ತಿನ ಕ್ಷೇತ್ರದ ಬಲವರ್ದನೆಗಾಗಿ ಪ್ರತ್ಯೇಕ ಸಹಕಾರಿ ನ್ಯಾಯಾಲಯಗಳನ್ನು ಸ್ಥಾಪಿಸಲು ಮಾನ್ಯ ಸಹಕಾರ ಸಚಿವರಲ್ಲಿ ಮನವಿ ಶೀಘ್ರವೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿರುವ ವಿಷಯವನ್ನು ಹರ್ಷದಾಯಕವಾಗಿ ನೆರೆದಿದ್ದ ಸಹಕಾರಿಗಳಿಗೆ ತಿಳಿಸಿದರು.
ಕಾಗಿನೆಲೆ ಕನಕ ಗುರು ಪೀಠದ ಅಮೋಘ ಸಿದ್ಧೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಾಜಿ ಸಚಿವ ರುದ್ರಪ್ಪ ಲಮಾಣಿ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀ ಎಸ್.ಕೆ.ಕರಿಯಣ್ಣನವರ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷರಾದ ಎನ್. ಗಂಗಣ್ಣ, ಕರ್ನಾಟಕ ರಾಜ್ಯ ಪತ್ತಿನ ಸಹಕಾರ ಸಂಘಗಳ ಮಹಾಮಂಡಳದ ಅಧ್ಯಕ್ಷರಾದ ಶ್ರೀ ಸಿ.ಎಂ.ಮಾರೇಗೌಡ, ಉಪಾಧ್ಯಕ್ಷರಾದ ಡಾ|| ಸಂಜಯ ಪಂ. ಹೊಸಮಠ, ಮಹಾಮಂಡಳದ ನಿರ್ದೇಶಕರುಗಳಾದ ಶ್ರೀ ವಿ. ರಾಜು, ಶ್ರೀ ಶಿವರಾಜ್ ಬಿ. ಪಾಟೀಲ್, ಡಾ|| ಬಿ.ಡಿ. ಭೂಕಾಂತ್, ಶ್ರೀ ಗುರುರಾಜ್ ಹುಣಸಿಮರದ, ಶ್ರೀ ಎಂ.ಜೆ. ನರೇಂದ್ರ ಕುಮಾರ, ಶ್ರೀ ಡಿ. ಚನ್ನಯ್ಯ, ಶ್ರೀ ಕೆ.ಕೆ. ಮಹೇಂದ್ರಪ್ರಸಾದ್ ಗೌಡ, ಶ್ರೀ ಜಿ. ಮಲ್ಲಿಕಾರ್ಜುನಯ್ಯ, ಶ್ರೀ ತಮ್ಮಣ್ಣ ಬಿ. ಕೆಂಚರಡ್ಡಿ, ಶ್ರೀ ಧರೇಪ್ಪ ಎಂ. ಅಲಗೂರ, ಶ್ರೀ ಗುರುಪಾದಪ್ಪಗೌಡ ಬ. ಪಾಟೀಲ, ಶ್ರೀ ಹೊನ್ನಯ್ಯ ವಿ. ಹಿರೇಮಠ, ಶ್ರೀ ಆಕಾಶ ಪಾಟೀಲ, ಶ್ರೀ ಪಿ.ಕೆ. ಜಯಕೃಷ್ಣೇಗೌಡ ಮತ್ತು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷರಾದ ಶ್ರೀ ಕಲ್ಯಾಣಕುಮಾರ ಶೆಟ್ಟರ್, ಕಾಗಿನೆಲೆ ಪ್ರಾಧಿಕಾರದ ಆಯುಕ್ತರಾದ ಶ್ರೀ ಮಲ್ಲೇಶಪ್ಪ ಹೊರಪೇಟೆ, ಕನಕ ಗುರುಪೀಠದ ಆಡಳಿತಾಧಿಕಾರಿ ಶ್ರೀ ಎಸ್.ಎಫ್.ಎನ್. ಗಾಜಿಗೌಡ್ರ ಈ ಸಂದರ್ಭದಲ್ಲಿ ಮಹಾಮಂಡಳದ ಸಲಹೆಗಾರರಾದ ಶ್ರೀ ಕೆ.ಎಸ್. ಗುರುಪ್ರಸಾದ್ ಮತ್ತು ಪ್ರಭಾರ ಮುಖ್ಯಕಾರ್ಯನಿರ್ವಹಣಾಧಿಕಾರಿಯಾದ ಶ್ರೀ ಮತಿ ಪಿ. ಆಶಾಲತಾ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.
65ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮದ 5ನೇ ದಿನದ ಆಚರಣೆಯ ವಿಷಯವಾದ “ಸಹಕಾರ ಸಂಸ್ಥೆಗಳ ಮೂಲಕ ಸಹಕಾರಿ ಯೋಜನೆಗಳು ಮತ್ತು ಆದಾಯೋತ್ಪನ್ನ ಕುರಿತು ಜಾಗೃತಿ ಮೂಡಿಸುವುದು” ಈ ವಿಷಯದ ಬಗ್ಗೆ ಶ್ರೀ ಶಶಿಧರ ಎಲೆ ರವರು, ಸಹಕಾರ ಸಂಘಗಳ ಅಪರ ನಿಬಂಧಕರು (ನಿವೃತ್ತ) ಇವರು ವಿಷಯ ಮಂಡಿಸಿ ಸರ್ಕಾರ ಮತ್ತು ಸಹಕಾರ ಇಲಾಖೆ ಯಾವರೀತಿ ಯೋಜನೆಗಳನ್ನು ಅನುಷ್ಠಾನ ಮಾಡಿ ಹಸಿರು ಕ್ರಾಂತಿ, ಕ್ಷೀರ ಕ್ರಾಂತಿ ಮತ್ತು ನೀಲಿ ಕ್ರಾಂತಿಗೆ ಕಾರಣವಾಯಿತು. ಈಗಿನ ಎರಡನೆಯ ಹಸಿರು ಕ್ರಾಂತಿಗೆ ಯಾವ ರೀತಿ ಸವಾಲುಗಳಿವೆ ಹಾಗೂ ಆ ಸವಾಲುಗಳನ್ನು ಯಾವ ರೀತಿಯಲ್ಲಿ ಏದುರಿಸಬೇಕು ಹಾಗೂ ಸರ್ಕಾರದ ಇತ್ತೀಚಿನ ಯೋಜನೆಗಳಾದ ಕ್ಷೀರ ಭಾಗ್ಯ, ಸೂನ್ಯ ಬಡ್ಡಿ ಸಾಲಭಾಗ್ಯ, ಕೃಷಿ ಸಾಲ, ಬಡವರ ಬಂದು ಹಾಗೂ ಕಾಯಕ ಯೋಜನೆಗಳನ್ನು ಸಹಕಾರ ಸಂಘಗಳು ಯಾವರೀತಿ ಅನುಷ್ಟಾನ ಮಾಡಬೇಕು ಹಾಗೂ ಈ ಯೋಜನೆಯ ಅನುಕೂಲವನ್ನು ಪಡೆದುಕೊಳ್ಳುವ ಮೂಲಕ ಅಭಿವೃದ್ದಿ ಸಾದಿಸುವುದು ಸಾದ್ಯವೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾನ್ಯ ಸಹಕಾರ ಸಚಿವರ ಉಪಸ್ಥಿತಿಯಲ್ಲಿ 2018ನೇ ಸಾಲಿಗೆ ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳದ ವತಿಯಿಂದ ಸಹಕಾರ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿರುವ 59 ಉತ್ತಮ ಸಹಕಾರ ಸಂಘಗಳು ಮತ್ತು 37 ಸಹಕಾರಿಗಳಿಗೆ ಉತ್ತಮ ಸಹಕಾರಿ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.

Back To Top