+91 80 2244 4033 ksccsfltd@gmail.com

Karnataka State Co-Op Credit Societies Federation Ltd.

ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ನಿಯಮಿತ

ರಾಜ್ಯ ಸಹಕಾರ ಮಹಾಮಂಡಳದ ನೇತೃತ್ವದಲ್ಲಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿಗಳ ರಾಜ್ಯಮಟ್ಟದ ವಿಶೇಷ ತರಬೇತಿ ಕಾರ್ಯಾಗಾರ

ದಿನಾಂಕ: 31-01-2018 ರಂದು ಬಿ.ಇ.ಎಲ್.ರಾಷ್ಟ್ರಕವಿ ಕುವೆಂಪು ಕಾಲಾಕ್ಷೇತ್ರ, ಜಾಲಹಳ್ಳಿ ಇಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ನಿ., ಬೆಂಗಳೂರು ಇದರ ಸಂಯುಕ್ತಾಶ್ರಯದಲ್ಲಿ ನಡೆದ “ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿಗ ರಾಜ್ಯಮಟ್ಟದ ವಿಶೇಷ ತರಬೇತಿ ಕಾರ್ಯಾಗಾರವನ್ನು, ಶ್ರೀ ಸಿ.ಎಂ.ಮಾರೇಗೌಡ, ಅಧ್ಯಕ್ಷರು, ಪತ್ತಿನ ಸಹಕಾರ ಸಂಘಗಳ ಮಹಾಮಂಡಳ ನಿ., ಇವರು ಉದ್ಘಾಟಿಸಿದರು, ಕಾರ್ಯಾಗಾರದ ಅಧ್ಯಕ್ಷತೆಯನ್ನು ಶ್ರೀ ಹೆಚ್.ವಿ.ನಾಗರಾಜ್, ಉಪಾಧ್ಯಕ್ಷರು, ರಾಜ್ಯ ಸಹಕಾರ ಮಹಾಮಂಡಳ ನಿ., ಇವರು ವಹಿಸಿದರು. ಮುಖ್ಯಅತಿಥಿಗಳಾಗಿ ಡಾ: ಸಂಜಯ್ ಪಿ. ಹೊಸಮಠ, ಉಪಾಧ್ಯಕ್ಷರು, ರಾಜ್ಯ ಪತ್ತಿನ ಸಹಕಾರ ಮಹಾಮಂಡಳ ನಿ., ರವರು ಭಾಗವಹಿಸಿದರು. ಅತಿಥಿಗಳಾಗಿ ರಾಜ್ಯ ಪತ್ತಿನ ಸಹಕಾರ ಮಹಾಮಂಡಳದ ನಿರ್ದೇಶಕರುಗಳಾದ ಶ್ರೀ ವಿ.ರಾಜು, ಶ್ರೀ ಎಂ.ಜೆ.ನರೇಂದ್ರ ಕುಮಾರ, ಶ್ರೀ ಜಿ.ಮಲ್ಲಿಕಾರ್ಜುನಯ್ಯ, ಶ್ರೀ ಕೆ.ಕೆ.ಮಹೇಂದ್ರಪ್ರಸಾದ್ ಗೌಡ ಮತ್ತು ಶ್ರೀ ಎಂ.ಡಿ. ನರಸಿಂಹಮೂರ್ತಿ, ಸಹಕಾರ ಸಂಘಗಳ ಜಂಟಿ ನಿಬಂಧಕರು, ಬೆಂಗಳೂರು ಪ್ರಾಂತ, ಬೆಂಗಳೂರು ಇವರು ಭಾಗವಹಿಸಿದ್ದರು. ಹಾಗೂ ರಾಜ್ಯ ಮಹಾಮಂಡಳದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಎಸ್.ಎನ್.ಅರುಣ್‍ಕುಮಾರ್, ವ್ಯವಸ್ಥಾಪಕರ ನಿರ್ದೇಶಕರು, ಶ್ರೀ ಪಿ.ಎಂ.ನಾಗಶಯನ, ಕಾರ್ಯದರ್ಶಿ, ಶ್ರೀಮತಿ ವೀಣಾನಾಗೇಶ್, ನಿರ್ದೇಶಕರು (ಆರ್&ಇ) ಮತ್ತು ಸಮನ್ವಯಾಧಿಕಾರಿ ಮತ್ತು ಶ್ರೀ ಕೆ.ಎಸ್.ಗುರುಪ್ರಸಾದ್, ಮುಖ್ಯಕಾರ್ಯನಿರ್ವಹಣಾಧಿಕಾರಿಗಳು, ಪತ್ತಿನ ಸಹಕಾರ ಮಹಾಮಂಡಳ ಇವರು ಹಾಜರಿದ್ದರು, ಕಾರ್ಯಾಗಾರದ ವಿಷಯ ನಿರ್ವಹಕಾರಗಿ ಶ್ರೀ ಹೆಚ್.ಎಸ್.ನಾಗರಾಜಯ್ಯ, ಸಹಕಾರ ಸಂಘಗಳ ಅಪರ ನಿಬಂಧಕರು (ನಿವೃತ್ತ) ಇವರು ಸಹಕಾರ ಸಂಘಗಳಿಗೆ ಸಂಬಂಧಪಟ್ಟ ಕಾಯ್ದೆ ಹಾಗೂ ಇತ್ತೀಚಿನ ತಿದ್ದುಪಡಿಗಳ ಕುರಿತು ಶ್ರೀ ಸುಧಾಕರ್, ಪ್ರಾಂತೀಯ ವ್ಯವಸ್ಥಾಪಕರು, ಸ್ಟಾಕ್ ಹೋಲ್ಡಿಂಗ್ ಕಾರ್ಪೋರೇಷನ್ ಆಫ್ ಇಂಡಿಯಾ, ಬೆಂಗಳೂರು ಇವರು ಇ-ಸ್ಟಾಂಪಿಂಗ್ ಕಾಯ್ದೆ ಹಾಗೂ ಕಾನೂನಿನ ಮುಖ್ಯಾಂಶಗಳ ಕುರಿತು ಹಾಗೂ ಶ್ರೀ ಡಿ.ಆರ್.ವೆಂಕಟೇಶ್, ಸಿ.ಎ, ಇವರು ಸಹಕಾರ ಸಂಘಗಳಿಗೆ ಅನ್ವಯವಾಗುವಂತೆ ಇತ್ತೀಚಿನ ಆದಾಯ ತೆರಿಗೆಯ ಬದಲಾವಣೆ ಕುರಿತು ಉಪಾನ್ಯಾಸ ನೀಡಿದರು.

Back To Top